Friday, 03 July 2026
ಆರೋಗ್ಯ

ಮೆಡಿಕವರ್ ಆಸ್ಪತ್ರೆಯಲ್ಲಿ ಬೃಹತ್ 40 ಸೆಂ.ಮೀ. ಗಾತ್ರ ಹಾಗೂ 4.5 ಕೆ.ಜಿ. ತೂಕದ ಎರಡೂ ಬೃಹತ್ ಮೂತ್ರಪಿಂಡಗಳ ಯಶಸ್ವಿ ಶಸ್ತ್ರಚಿಕಿತ್ಸೆ

ಬೆಂಗಳೂರು, ಜೂನ್ 29: ಮೆಡಿಕವರ್ ಆಸ್ಪತ್ರೆಯ ಡಾ ಮಹದೇವ್ ದೇಸಾಯಿ ಮತ್ತು ಡಾ ದಿಲೀಪ್ ನೇತೃತ್ವದ ತಜ್ಞ ವೈದ್ಯರ ತಂಡವು ಅಪರೂಪದ ಹಾಗೂ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿದ್ದಾರೆ. 47 ವರ್ಷದ ರೋಗಿಯ ಎರಡೂ ಅಸಾಮಾನ್ಯವಾಗಿ ದೊಡ್ಡದಾಗಿದ್ದ ಮೂತ್ರಪಿಂಡಗಳನ್ನು (Kidneys) ಸುರಕ್ಷಿತವಾಗಿ ತೆರವುಗೊಳಿಸಿದೆ.

ರೋಗಿಯು ಆಟೋಸೋಮಲ್ ಡಾಮಿನೆಂಟ್ ಪಾಲಿಸಿಸ್ಟಿಕ್ ಕಿಡ್ನಿ ಡಿಸೀಸ್ (ADPKD) ಎಂಬ ಅಪರೂಪದ ಅನುವಂಶಿಕ ಕಾಯಿಲೆಯಿಂದ ಕಳೆದ 12 ವರ್ಷಗಳಿಂದ ಬಳಲುತ್ತಿದ್ದು, ಕಳೆದ ಎರಡು ವರ್ಷಗಳಿಂದ ಅಂತಿಮ ಹಂತದ ಮೂತ್ರಪಿಂಡ ವೈಫಲ್ಯ (End Stage Renal Disease) ಕಾರಣ ನಿಯಮಿತ ಹೀಮೋಡಯಾಲಿಸಿಸ್ ಪಡೆಯುತ್ತಿದ್ದರು. ಕುಟುಂಬದಲ್ಲಿಯೂ ಈ ಕಾಯಿಲೆಯ ಹಿನ್ನೆಲೆ ಇದ್ದು, ರೋಗಿಯ ಸಹೋದರ ಇದೇ ಕಾಯಿಲೆಯಿಂದ ಮೃತಪಟ್ಟಿದ್ದರು.

ಕಳೆದ ಕೆಲವು ತಿಂಗಳುಗಳಿಂದ ರೋಗಿಗೆ ಮರುಕಳಿಸುವ ಕಿಡ್ನಿ ಸಿಸ್ಟ್ ಸೋಂಕು, ಸಿಸ್ಟ್‌ಗಳಲ್ಲಿ ರಕ್ತಸ್ರಾವ ಹಾಗೂ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಹಲವು ಔಷಧಿಗಳ ಚಿಕಿತ್ಸೆಯ ಬಳಿಕವೂ ಸೋಂಕು ನಿಯಂತ್ರಣಕ್ಕೆ ಬಾರದ ಕಾರಣ ಶಸ್ತ್ರಚಿಕಿತ್ಸೆ ಅನಿವಾರ್ಯವಾಯಿತು.

ಮೆಡಿಕವರ್ ಆಸ್ಪತ್ರೆಯ ಯೂರಾಲಜಿ ವಿಭಾಗದ ಡಾ. ದಿಲೀಪ್ ಮತ್ತು ಅವರ ತಂಡ ಅತ್ಯಂತ ಸಂಕೀರ್ಣವಾದ ದ್ವಿಪಕ್ಷೀಯ ನೆಫ್ರೆಕ್ಟಮಿ (Bilateral Nephrectomy) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದರು.

ಶಸ್ತ್ರಚಿಕಿತ್ಸೆಯ ವೇಳೆ ಮೂತ್ರಪಿಂಡಗಳನ್ನು ತೆರವುಗೊಳಿಸಿದ ನಂತರ ರೋಗಿಯಲ್ಲಿ ತೀವ್ರ ರಕ್ತದೊತ್ತಡ ಕುಸಿತ (Severe Hypotension) ಉಂಟಾದರೂ, ವೈದ್ಯರ ತಂಡ ಮುಂಚಿತ ಸಿದ್ಧತೆಯೊಂದಿಗೆ ಅದನ್ನು ಸಮರ್ಥವಾಗಿ ನಿರ್ವಹಿಸಿತು. ರೋಗಿಗೆ ಬಹು ಪ್ರಮಾಣದ ರಕ್ತ ವರ್ಗಾವಣೆ (Multiple Blood Transfusions) ಹಾಗೂ ಮೂರು ವಿಧದ ವಾಸೋಪ್ರೆಸರ್ ಔಷಧಿಗಳ ಸಹಾಯದಿಂದ ಸ್ಥಿರ ಸ್ಥಿತಿಗೆ ತರಲಾಯಿತು.


ಶಸ್ತ್ರಚಿಕಿತ್ಸೆಯಲ್ಲಿ ತೆರವುಗೊಳಿಸಿದ ಪ್ರತಿಯೊಂದು ಮೂತ್ರಪಿಂಡವು ಸುಮಾರು 40 ಸೆಂ.ಮೀ. ಉದ್ದ ಹಾಗೂ 4.5 ಕೆ.ಜಿ.ಗಿಂತ ಹೆಚ್ಚು ತೂಕ ಹೊಂದಿದ್ದು, ಸಾಮಾನ್ಯ ಮೂತ್ರಪಿಂಡದ ಗಾತ್ರ (9–12 ಸೆಂ.ಮೀ.) ಮತ್ತು ತೂಕ (125–175 ಗ್ರಾಂ)ಕ್ಕೆ ಹೋಲಿಸಿದರೆ ಹಲವು ಪಟ್ಟು ದೊಡ್ಡದಾಗಿತ್ತು

Leave a Reply

Your email address will not be published. Required fields are marked *