ಬೆಂಗಳೂರು, ಆಗಸ್ಟ್ 1: ವಿಶ್ವ ಸ್ತನ್ಯಪಾನ ಸಪ್ತಾಹ–2026ರ ಅಂಗವಾಗಿ ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಬೆಂಗಳೂರು, ಅತ್ಯಾಧುನಿಕ ವಾಟರ್ ಬರ್ತಿಂಗ್ ಸೂಟ್ ಅನ್ನು ಉದ್ಘಾಟಿಸಿ, ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.
ಹೊಸ ವಾಟರ್ ಬರ್ತಿಂಗ್ ಸೂಟ್ ಗರ್ಭಿಣಿಯರಿಗೆ ನೀರಿನ ಸಹಾಯದಿಂದ ಸಹಜ, ಆರಾಮದಾಯಕ ಹಾಗೂ ಒತ್ತಡರಹಿತ ಹೆರಿಗೆ ಅನುಭವವನ್ನು ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಅನುಭವಿ ಪ್ರಸೂತಿ ತಜ್ಞರು, ನವಜಾತ ಶಿಶು ತಜ್ಞರು, ಅನಸ್ತೇಷಿಯಾ ತಜ್ಞರು ಹಾಗೂ ವಿಶೇಷ ತರಬೇತಿ ಪಡೆದ ನರ್ಸಿಂಗ್ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ತಾಯಿ ಮತ್ತು ಮಗುವಿನ ಸುರಕ್ಷತೆಯನ್ನು ಖಚಿತಪಡಿಸಲಾಗುತ್ತದೆ.
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಆಸ್ಪತ್ರೆಯಲ್ಲಿ ಸ್ತನ್ಯಪಾನದ ಮಹತ್ವ, ಜನನದ ತಕ್ಷಣವೇ ಸ್ತನ್ಯಪಾನ ಆರಂಭಿಸುವ ಅಗತ್ಯತೆ, ಮೊದಲ ಆರು ತಿಂಗಳು ಕೇವಲ ತಾಯಿಯ ಹಾಲನ್ನೇ ನೀಡುವ ಮಹತ್ವ ಹಾಗೂ ಸ್ತನ್ಯಪಾನದ ಕುರಿತು ಇರುವ ತಪ್ಪು ಕಲ್ಪನೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಮೆಡಿಕವರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸೆಂಟರ್ ಹೆಡ್ ಶ್ರೀವಲ್ಲಿ ಡಾ. ಪ್ರವೀಣ್, ಡಾ. ಲತೀಶ್, ಡಾ. ಶಿವಶಂಕರ್ ಹಾಗೂ ಡಾ. ತೇಜಿ ದವನೆ ಅವರು ಚಾಲನೆ ನೀಡಿದರು.
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ 50ಕ್ಕೂ ಹೆಚ್ಚು ತಾಯಂದಿರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ಈ ವಿಶೇಷ ಸಂದರ್ಭದಲ್ಲಿ ಆಸ್ಪತ್ರೆಯು ಸೀಮಿತ ಅವಧಿಯ ಉದ್ಘಾಟನಾ ವಿಶೇಷ ಆಫರ್ ಅನ್ನು ಘೋಷಿಸಿದೆ. ಹೆರಿಗೆ ಪ್ಯಾಕೇಜ್ ಅನ್ನು ಮುಂಗಡವಾಗಿ ಬುಕ್ ಮಾಡುವ ಕುಟುಂಬಗಳಿಗೆ ₹10,000 ರಿಯಾಯಿತಿ ಹಾಗೂ ಉಚಿತ ಸೂಟ್ ರೂಮ್ ಅಪ್ಗ್ರೇಡ್ ಸೌಲಭ್ಯವನ್ನು ನೀಡಲಾಗುತ್ತಿದೆ.
ಇದರೊಂದಿಗೆ ಹೊಸ ಪೋಷಕರಿಗೆ ಕ್ಯಾಂಡಲ್ ಲೈಟ್ ಡಿನ್ನರ್, ವಿಶೇಷ ಗಿಫ್ಟ್ ಹ್ಯಾಂಪರ್, ಲಕ್ಕಿ ಡ್ರಾದಲ್ಲಿ ಭಾಗವಹಿಸುವ ಅವಕಾಶ ಹಾಗೂ ಅನುಭವಿ ಲ್ಯಾಕ್ಟೇಷನ್ ತಜ್ಞರಿಂದ ಉಚಿತ ವೈಜ್ಞಾನಿಕ ಗರ್ಭಪೂರ್ವ ಸ್ತನ್ಯಪಾನ ಮಾರ್ಗದರ್ಶನ (Scientific Antenatal Breastfeeding Session) ಕೂಡ ಒದಗಿಸಲಾಗುತ್ತದೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಮಾತನಾಡಿ, “ವಾಟರ್ ಬರ್ತಿಂಗ್ ಸೂಟ್ ಆರಂಭಿಸುವ ಮೂಲಕ ತಾಯಂದಿರಿಗೆ ಸುರಕ್ಷಿತ, ಆರಾಮದಾಯಕ ಹಾಗೂ ವಿಶ್ವಮಟ್ಟದ ಹೆರಿಗೆ ಸೇವೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಮತ್ತಷ್ಟು ಬಲಪಡಿಸಿದ್ದೇವೆ. ತಾಯಿ ಮತ್ತು ಮಗುವಿನ ಆರೋಗ್ಯ, ಸುರಕ್ಷತೆ ಹಾಗೂ ಸಂತೃಪ್ತಿಗೆ ಆದ್ಯತೆ ನೀಡುವ ಗುಣಮಟ್ಟದ ಸೇವೆಗಳನ್ನು ಮುಂದುವರಿಸುತ್ತೇವೆ” ಎಂದು ತಿಳಿಸಿದರು.





Leave a Reply